ಮೈಸೂರು : ಮಹಿಷಾ ದಸರಾ ವಿರೋಧಿಸಿ ಅ.13 ರಂದು ನಡೆಯಲಿರುವ ಚಲೋ ಚಾಮುಂಡಿ ಬೆಟ್ಟ ಜಾಥಾಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು ಎಂದು ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.
ಚಲೋ ಚಾಮುಂಡಿ ಬೆಟ್ಟ ಜಾಥಾ ಹಿನ್ನೆಲೆಯಲ್ಲಿ ತಿಲಕ್ ನಗರದ ಶ್ರೀರಾಮ ಮಂದಿರದಲ್ಲಿ ಮಂಗಳವಾರ ನಡೆದ ವಾರ್ಡ್ ಸಭೆಯಲ್ಲಿ ಮಾತನಾಡಿದ ಅವರು, ಮಹಿಷಾ ದಸರಾ ವಿರೋಧಿಸಿ ಬಿಜೆಪಿಯಿಂದ ಚಲೋ ಚಾಮುಂಡಿಬೆಟ್ಟ ಜಾಥಾ ಹಿನ್ನೆಲೆಯಲ್ಲಿ ವಾರ್ಡ್ ವಾರು ಪೂರ್ವಭಾವಿ ಸಭೆ ನಡೆಸಲು ಮುಂದಾಗಿದ್ದೇವೆ. ಮೈಸೂರಿನ ತಿಲಕ್ ನಗರದ ವಾರ್ಡ್ ನಂ.25 ರಲ್ಲಿ ಮೊದಲ ಸಭೆ ನಡೆಸಿದ್ದೇವೆ ಎಂದರು.
ಮಹಿಷಾ ದಸರಾ ಎಂಬ ಅನಾಚಾಚಾರವನ್ನು ಎಲ್ಲರೂ ಸೇರಿ ತಡೆಯಬೇಕು. ಯಾರೋ ಮೂರು ಮತ್ತೊಂದು ಜನ ಕಿಡಿಗೇಡಿಗಳು ಮಾಡಬೇಕು ಎಂದು ಹೊರಟಿರುವ ಈ ಮಹಿಷ ದಸರಾವನ್ನು ತಡೆಯಲೇಬೇಕು. ಅ.13ರ ಬೆಳಗ್ಗೆ 8ಕ್ಕೆ ತಾವರೆಕಟ್ಟೆ ಬಳಿಗೆ ಎಲ್ಲರೂ ಬನ್ನಿ, ಎಲ್ಲರೂ ಸೇರಿ ಒಟ್ಟಾಗಿ ಬೆಟ್ಟಕ್ಕೆ ಹೋಗೋಣ ಎಂದು ಅವರು ಹೇಳಿದರು.
ಮೈಸೂರು ನಗರದ ಹಲವು ಭಾಗಗಳಿಂದ ಸಾವಿರಾರು ಜನರು ನಮ್ಮ ಪರವಾಗಿ ಬರುತ್ತಾರೆ. ಮಹಿಷ ಪ್ರತಿಮೆಯ ಬಳಿ ಎಲ್ಲರೂ ಕೂರೋಣ. ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ನಡೆಸುವ ಅನಾಚಾರವನ್ನು ಮಟ್ಟ ಹಾಕೋಣ. ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಅಪವಿತ್ರ ಮಾಡುವವರನ್ನು ವಿರುದ್ಧ ಸಂಘರ್ಷವಾದರೂ ಸರಿ ತಡೆಯೋಣ ಎಂದು ಅವರು ಕರೆ ನೀಡಿದರು.