ಚಾಮರಾಜನಗರ : ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯ ಮುಡಿಕಟ್ಟೆಯಲ್ಲಿ ಭಕ್ತರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಸಿಬ್ಬಂದಿಗೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಮುಡಿ ತೆಗಿಸಿಕೊಳ್ಳಲು ಬರುವ ಭಕ್ತರಿಂದ ಯಾವುದೇ ಕಾರಣಕ್ಕೂ ಹೆಚ್ಚುವರಿ ಹಣವನ್ನು ಪಡೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಮುಡಿ ಮಾಡಿಸಿಕೊಳ್ಳಲು ಹರಕೆ ಹೊತ್ತು ಮಲೆ ಮಹದೇಶ್ವರಬೆಟ್ಟಕ್ಕೆ ಬರುವ ಪ್ರತಿ ಭಕ್ತರ ಮುಡಿಸೇವೆಗೆ 50 ರೂ. ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ನಿಗದಿ ಮಾಡಿಲಾಗಿದೆ. ಹೀಗಿದ್ದರೂ ಸಹ ಮುಡಿ ತೆಗೆಯುವವರು ಪ್ರತಿ ಭಕ್ತರಿಂದ ಹೆಚ್ಚುವರಿಯಾಗಿ 50 ರೂ.ಗಳನ್ನು ಪಡೆಯುತ್ತಿದ್ದರು ಎನ್ನುವ ಕೂಗು ಕೇಳಿ ಬರುತ್ತಿತ್ತು.
ಮುಡಿಕಟ್ಟೆಯಲ್ಲಿ ಪ್ರತಿ ಭಕ್ತರಿಂದ ಹೆಚ್ಚುವರಿಯಾಗಿ 50 ರೂ. ವಸೂಲಿ ಮಾಡಲಾಗುತ್ತಿದೆ ಎನ್ನುವ ಭಕ್ತರ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಇಂದು ಮುಡಿಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸುವ ವೇಳೆ ಭಕ್ತರಿಂದ ಹೆಚ್ಚುವರಿ ಹಣ ಪಡೆಯುವುದು ಬೆಳೆಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಮುಡಿ ತೆಗೆಯುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.